ಭವಿನಾ ಹಸ್ಮುಖ್ ಭಾಯ್ ಪಟೇಲ್ ಅವರು ಅಂತರರಾಷ್ಟ್ರೀಯ ಪ್ಯಾರ್ ಟೇಬಲ್ ಟೆನ್ನಿಸ್ ಕ್ರೀಡಾಪಟು. ಇವರು ನ ಮೆಹ್ಸಾನದವರು. ಇವರು ೨೦೨೦ ರ ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಕ್ಲಾಸ್-೪ ವಿಭಾಗದ ಟೇಬಲ್ ಟೆನ್ನಿಸ್ಸಿನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಭವಿನಾ ಅವರು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸಿಗಳನ್ನು ಗೆದ್ದಿದ್ದಾರೆ. ಅವರು ೨೦೧೧ರಲ್ಲಿ ಥಾಯ್ಲಾಂಡ್ ನಲ್ಲಿ ನಡೆದ ಪಿ.ಟಿ.ಟಿ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿಪದಕವನ್ನು ಗೆಲ್ಲುವ ಮೂಲಕ ವರ್ಲ್ಡ್ ನಂ ೨ ರ್ಯಾಂಕಿಂಗಿಗೆ ಏರಿದರು. == ಏಷಿಯನ್ ಪ್ಯಾರಾ ಟೇಬಲ್ ಟೆನ್ನಿಸ್ ಚಾಂಪಿಯನ್ ಷಿಪ್ == ಅಕ್ಟೋಬರ್ ೨೦೧೩ರಲ್ಲಿ ಬೀಜಿಂಗಿನಲ್ಲಿ ನಡೆದ ಏಷಿಯನ್ ಪ್ಯಾರಾಲಿಂಪಿಕ್ಸಿನಲ್ಲಿ ಇವರು ಬೆಳ್ಳಿಪದಕವನ್ನು ಗೆದ್ದರು. ೨೦೧೭ರ ಆಗಸ್ಟ್ ೨೩ರಿಂದ ೩೧ರ ವರೆಗೆ ಬೀಜಿಂಗಿನಲ್ಲಿ ನಡೆದ ಏಷಿಯನ್ ಪ್ಯಾರಾಲಿಂಪಿಕ್ಸಿನಲ್ಲಿ ಇವರು ಕಂಚಿನ ಪದಕವನ್ನು ಗೆದ್ದರು. ಇವರನ್ನು ಕೋಚ್ ಲಾಲನ್ ದೋಶಿ ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ. == ಟೋಕಿಯಾ ೨೦೨೦ ಪ್ಯಾರಾಲಿಂಪಿಕ್ಸ್ == ೨೦೨೦ರ ಟೋಕಿಯೋ ಪ್ಯಾರಾಲಿಂಪಿಕ್ಸಿನಲ್ಲಿ ಇವರು ಪ್ರಪಂಚದ ೨ನೇ ರ್ಯಾಂಕಿಗಿನಲ್ಲಿದ್ದ ಮತ್ತು ಹಿಂದಿನ ರಿಯೋ ಒಲಂಪಿಕ್ಸಿನ ಸ್ವರ್ಣ ಪದಕ ವಿಜೇತೆ ಬೋರಿಸ್ಲವ ರಾಂಕೋವಿಕ್ ಅವರನ್ನು ಕ್ವಾಟರ್ ಫೈನಲ್ಲಿನಲ್ಲಿ ಸೋಲಿಸಿದರು. ಇವರು ಚೀನಾದ ಝಾಂಗ್ ಮಿಯಾ ಅವರನ್ನು ಸೋಲಿಸಿ ಫೈನಲ್ಲಿಗೇರಿದರು. ಇವರು ಚೀನಾದವರೇ ಆದ ಪ್ರಸ್ತುತ ೨ನೇ ರ್ಯಾಂಕಿಂಗಿನಲ್ಲಿರುವ ಝಾವ್ ಯಿಂಗ್ ಅವರೆದುರು ಫೈನಲ್ಲಿನಲ್ಲಿ ಸೋಲು ಕಂಡು ಪ್ಯಾರಾಲಿಂಪಿಕ್ಸಿನಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. == ವೃತ್ತಿ ಜೀವನ == ಭವಿನಾ ಪಟೇಲ್ ಅವರು ಪ್ರಸ್ತುತ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಕೆಳಗೆ ಬರುವ () ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಅಹಮದಾಬಾದಿನ ಆಫೀಸಿನಲ್ಲಿ ಸಹಾಯಕ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. == ಉಲ್ಲೇಖಗಳು ==